ಸೋಮವಾರ, ಸೆಪ್ಟೆಂಬರ್ 17, 2018

ಸರಿಯುತ್ತರಗಳು : G.K. ಮಾದರಿ ಪರೀಕ್ಷೆ-9 (16/9/18)

ಸಾಧನಾ ಸ್ಪರ್ಧಾ ಅಕಾಡೆಮಿಶಿಕಾರಿಪುರ. 9449610920.
G.K. ಮಾದರಿ ಪರೀಕ್ಷೆ-9 (16/9/18)
ಸರಿಯುತ್ತರಗಳು

1. ಒಬ್ಬ ವ್ಯಕ್ತಿಯು ಬೆಟ್ಟವೊಂದನ್ನು ಏರುವಾಗ ಮುಂದಕ್ಕೆ ಸ್ವಲ್ಪ ಬಾಗಿರುತ್ತಾನೆ. ಕಾರಣ,
) ಜಾರುವಿಕೆಯನ್ನು ತಪ್ಪಿಸಲು    
ಬಿ) ವೇಗವನ್ನು ಹೆಚ್ಚಿಸಲು      
ಸಿ) ಆಯಾಸ ತಗ್ಗಿಸಲು              
ಡಿ) ಸ್ಥಿತಿ ಸ್ಥಾಪಕತೆ ಕಾಯ್ದುಕೊಳ್ಳಲು
1) D

2. ಒಂದು ಸ್ಪ್ರೇಯರ್ನಲ್ಲಿ ದ್ರವವು ನಾಳದ (ಟ್ಯೂಬ್) ಮೂಲಕ ಮೇಲಕ್ಕೇರಲು ಕಾರಣ,
) ಕ್ಯಾಪಿಲಾರಿ ಪರಿಣಾಮ       
ಬಿ) ಆವಿಯಾಗುವಿಕೆ          
ಸಿ) ಮೇಲ್ತುದಿಯಲ್ಲಿ ಕಡಿಮೆ ಒತ್ತಡ 
ಡಿ) ದ್ರವದ ಮೇಲೇರುವ ಗುಣ
2) C

3. ಮಧ್ಯದಲ್ಲಿ ರಂಧ್ರವೊಂದನ್ನು ಒಂದು ಲೋಹದ ತಟ್ಟೆಗೆ ಶಾಖವನ್ನು ನೀಡಿದರೆರಂಧ್ರದ ವ್ಯಾಸವು
) ಕಡಿಮೆಯಾಗುತ್ತದೆ          
ಬಿ) ಹೆಚ್ಚಾಗುತ್ತದೆ
ಸಿ) ವ್ಯತ್ಯಾಸವಾಗುವುದಿಲ್ಲ    
ಡಿ) ಮೊದಲು ಹೆಚ್ಚಾಗಿ ನಂತರ ಕಡಿಮೆಯಾಗುತ್ತದೆ.
3) B


4. ನೀರಿನ ಕುದಿಯುವ ಬಿಂದುವು,
) ಯಾವಾಗಲೂ 100 ಡಿಗ್ರಿ ಸೆಲ್ಸಿಯಸ್ ಆಗಿರುತ್ತದೆ          
ಬಿ) ವಾತಾವರಣದ ಒತ್ತಡವನ್ನು ಅವಲಂಬಿಸಿರುತ್ತದೆ
ಸಿ) ಸಾಪೇಕ್ಷ ಸಾಂದ್ರತೆಯನ್ನು ಅವಲಂಬಿಸಿದೆ      
ಡಿ) ಪಾತ್ರೆಗೆ ಬಳಸಿದ ಲೋಹವನ್ನು ಅವಲಂಬಿಸಿರುತ್ತದೆ
4) B


5. ಸೂರ್ಯ ಗ್ರಹಣವು ಸಂಭವಿಸುವುದು,
) ಕೇವಲ ಹುಣ್ಣಿಮೆಯಂದು  
ಬಿ) ಕೇವಲ ಅಮವಾಸ್ಯೆಯಂದು
ಸಿ) ಹುಣ್ಣಿಮೆ & ಅಮವಾಸ್ಯೆಯಂದು      
ಡಿ) ಸಂಕ್ರಾಂತಿಗಳಂದು ಮಾತ್ರ
5) B


6. ನಿರ್ದಿಷ್ಟ ದೂರದಿಂದ ಒಂದು ಸಮತಲ ಕನ್ನಡಿಯ ಕಡೆಗೆ 10 ಸೆಂ.ಮೀ/ಸೆ. ವೇಗದಲ್ಲಿ ನಡೆದು ಬರುತ್ತಿದ್ದೀರ. ಆಗ ನಿಮ್ಮ ಪ್ರತಿಬಿಂಬವು ನಿಮ್ಮನ್ನು ಸಮೀಪಿಸುತ್ತಿರುವ ವೇಗವು,
) 5 ಸೆಂ.ಮೀ/ಸೆ.
ಬಿ) 10 ಸೆಂ.ಮೀ/ಸೆ.             
ಸಿ) 20 ಸೆಂ.ಮೀ/ಸೆ.              
ಡಿ) ನಿರ್ಧರಿಸಲು ಸಾಧ್ಯವಿಲ್ಲ.
6) C


7. ನಬದಲ್ಲಿರುವ ಗಗನಯಾತ್ರಿಯೊಬ್ಬನಿಗೆ ಆಕಾಶವು ಕಾಣುವುದು,
) ಬಿಳಿಯಾಗಿ       
ಬಿ) ನೀಲಿಯಾಗಿ     
ಸಿ) ಕಪ್ಪಾಗಿ                            
ಡಿ) ಕಡುನೀಲಿಯಾಗಿ
7) C


8. ಮಹಿಳೆಯೊಬ್ಬಳ ಧ್ವನಿಯು ಪುರುಷರಿಗಿಂತ ಇಂಪಾಗಿರಲು ಕಾರಣ,
) ಹೆಚ್ಚಿನ ಫ್ರೀಕ್ವೆನ್ಸಿ               
ಬಿ) ಕಡಿಮೆ ಫ್ರೀಕ್ವೆನ್ಸಿ              
ಸಿ) ಹೆಚ್ಚಿನ ಆಂಪ್ಲಿಟ್ಯೂಡ್       
ಡಿ) ದುರ್ಬಲ ಧ್ವನಿ ಪೆಟ್ಟಿಗೆ
8) A

9. ಕಂಪ್ಯೂಟರ್ಗಳಲ್ಲಿ ಬಳಸುವ .ಸಿ. ಚಿಪ್ಗಳನ್ನು ಇದರಿಂದ ಮಾಡಲಾಗಿದೆ.
) ಸತು 
ಬಿ) ಸಿಲಿಕಾನ್        
ಸಿ) ಕ್ರೋಮಿಯಂ                   
ಡಿ) ತಾಮ್ರ
9) B


10. ವಾಹನಗಳ ವೇಗವನ್ನು ಪತ್ತೆ ಮಾಡಲು ಪೊಲೀಸರು ಬಳಸುವ ಗನ್ ತಯಾರು ಮಾಡಿದ್ದು ತಂತ್ರಜ್ಞಾನದಿಂದ,
) ಬರ್ನೂಲಿ ಸಿದ್ಧಾಂತ         
ಬಿ) ಡಾಫ್ಲರ್ ಪರಿಣಾಮ         
ಸಿ) ನ್ಯೂಟನ್ ಮೂರನೇ ನಿಯಮ 
ಡಿ) ರಾಮನ್ ಪರಿಣಾಮ
10) B


11. ರಾತ್ರಿ ವೇಳೆ ಮರದ ಕೆಳಗೆ ಮಲಗಬಾರದೆಂದು ಹೇಳುತ್ತಾರೆ. ಕಾರಣ,
) ಕಡಿಮೆ ಆಮ್ಲಜನಕ ಬಿಡುಗಡೆ ಮಾಡುತ್ತವೆ      
ಬಿ) ಹೆಚ್ಚು ಆಮ್ಲಜನಕ ಬಿಡುಗಡೆ ಮಾಡುತ್ತವೆ
ಸಿ) ಕಡಿಮೆ ಕಾರ್ಬನ್ ಡೈ ಆಕ್ಸೈಡ್ ಬಿಡುಗಡೆ ಮಾಡುತ್ತವೆ   
ಡಿ) ಹೆಚ್ಚು ಕಾರ್ಬನ್ ಡೈ ಆಕ್ಸೈಡ್ ಬಿಡುಗಡೆ ಮಾಡುತ್ತವೆ
11) A & D


12. ಮಹಿಳೆಯು ಗರ್ಭ ಧರಿಸುವ ಸೂಕ್ತ ಅವಧಿಯೆಂದು ಪರಿಗಣಿಸಿರುವುದು,
) ಋತು ಚಕ್ರದ ಯಾವುದೇ ಅವಧಿಯಲ್ಲಿ             
ಬಿ) ಋತು ಚಕ್ರದಿಂದ 7 ರಿಂದ 10 ನೇ ದಿನದ ಅವಧಿಯಲ್ಲಿ
ಸಿ) ಋತು ಚಕ್ರದ 14 ನೇ ದಿನದ ಅವಧಿಯಲ್ಲಿ         
ಡಿ) ಋತು ಚಕ್ರದ ಯಾವುದೇ ಅವಧಿಯಲ್ಲಿ
12) C


13. ಕಾಲು ಬಾಯಿ ರೋಗವು ಕಂಡು ಬರುವುದು,
) ಹಸುಗಳಲ್ಲಿ       
ಬಿ) ಹಸು ಮತ್ತು ಕುರಿಗಳಲ್ಲಿ
ಸಿ) ಹಸುಗಳು ಮತ್ತು ಹಂದಿಗಳಲ್ಲಿ          
ಡಿ) ಹಸು, ಕುರಿಗಳು ಮತ್ತು ಹಂದಿಗಳಲ್ಲಿ
13) D


14. ಸಾಮಾನ್ಯ ಮಾನವ ದೇಹದಲ್ಲಿ ಬಿಳಿ ರಕ್ತಕಣಗಳ ಅನುಪಾತವು ಕೆಂಪು ರಕ್ತಕಣಗಳಿಗೆ ಕ್ರಮವಾಗಿ ಇಷ್ಟಿರುತ್ತದೆ.
) 1 : 500            
ಬಿ) 1 : 700            
ಸಿ) 1 : 1000                          
ಡಿ) 1 : 1200
14) ಕೆಂಪು ರಕ್ತ ಕಣ : ಬಿಳಿ ರಕ್ತ ಕಣ : ಪ್ಲೇಟ್-ಲೇಟ್ಸ್ ಕ್ರಮವಾಗಿ :: 600 : 1 : 40


15. ಬಿತ್ತನೆ ಬೀಜಗಳನ್ನು ಉತ್ತಮವಾಗಿ ಸಂರಕ್ಷಿಸಿಡಲು ಇದು ಉತ್ತಮ
) ತಂಪಾದ ಒಣ ಹವಾಗುಣ
ಬಿ) ತಂಪಾದ ಹಸಿ ಹವಾಗುಣ
ಸಿ) ಉಷ್ಣವಾದ ಒಣ ಹವಾಗುಣ             
ಡಿ) ಉಷ್ಣವಾದ ತಂಪು ಹವಾಗುಣ
15) A

16. ಆಂಟಿ ಬಯೋಟಿಕ್ ಆದ ಪೆನ್ಸಿಲಿನ್ನ್ನು  ಪಡೆಯುವುದು ಇದರಿಂದ,
) ಬ್ಯಾಕ್ಟೀರಿಯಾದಿಂದ 
ಬಿ) ಫಂಗಸ್ನಿಂದ  
ಸಿ) ಸಿಂಥೆಟಿಕ್ಗಳಿಂದ            
ಡಿ) ವೈರಸ್ಗೊಳಗಾದ ಸೆಲ್ಗಳಿಂದ
16) B


17. ನಾಲಗೆಯ ತುದಿಯು ರುಚಿಯನ್ನು ಮಾತ್ರ ಗ್ರಹಿಸಿತ್ತದೆ.
) ಉಪ್ಪು               
ಬಿ) ಸಿಹಿ  
ಸಿ) ಕಹಿ                                   
ಡಿ) ಹುಳಿ
17) B


18. ಪುರುಷರ ಹೃದಯಕ್ಕೆ ಹೋಲಿಸಿದಾಗ ಮಹಿಳೆಯರ ಹೃದಯವು
) ಹೆಚ್ಚು ಬಡಿಯುತ್ತದೆ          
ಸಿ) ಕಡಿಮೆ ಬಡಿಯುತ್ತದೆ
ಸಿ) ವ್ಯತ್ಯಾಸವಾಗುವುದಿಲ್ಲ    
ಡಿ) ದೇಹದ ಗಾತ್ರವನ್ನು ಅವಲಂಬಿಸಿರುತ್ತದೆ.
18) A


19. ಚಾಕೊಲೇಟ್ಗಳು ಆರೋಗ್ಯಕ್ಕೆ ಹಾನಿಕರ ಎನ್ನಲು ಅದರಲ್ಲಿ ಹೆಚ್ಚಾಗಿರುವ ಅಂಶವೆಂದರೆ,
) ಕೋಬಾಲ್ಟ್     
ಬಿ) ನಿಕಲ್              
ಸಿ) ಜಿಂಕ್                               
ಡಿ) ಸತು
19) D


20. ಸಾಮಾನ್ಯ ಎಲೆಕ್ಟ್ರಿಕ್ ಬಲ್ಬ್ಗಳಲ್ಲಿರುವ ಅನಿಲವೆಂದರೆ,
) ಗಾಳಿ
ಬಿ) ಆಕ್ಸಿಜನ್         
ಸಿ) ಕಾರ್ಬನ್ ಡೈ ಆಕ್ಸೈಡ್    
ಡಿ) ನೈಟ್ರೋಜನ್
20) D

17 ಕಾಮೆಂಟ್‌ಗಳು:

  1. ನೀರಿನ ಕುದಿಯುವ ಬಿಂದು ಯಾವಾಗಲೂ 100 ಡಿಗ್ರಿ ಇರುವುದಿಲ್ಲ. ಅದು ಸಮುದ್ರ ಮಟ್ಟದಲ್ಲಿ ಮಾತ್ರ.

    ಒತ್ತಡ ಆಧರಿಸಿ ವ್ಯತ್ಯಾಸ ಆಗುತ್ತದೆ

    ಪ್ರತ್ಯುತ್ತರಅಳಿಸಿ

Study + Steady + Sadhana = SucceSS Model Test-10 | 5th July from 8am to 8pm | If you are New- Register Now https://play.google.com/store/app...