Friday, February 15, 2019

Study + Steady + Sadhana = SucceSS

ಸಾಧನಾ ಅಕಾಡೆಮಿ,  ಶಿಕಾರಿಪುರ. 9449610920.

ಕರ್ನಾಟಕದಲ್ಲಿ ಬ್ರಿಟಿಷ್ ಆಳ್ವಿಕೆಗೆ ಪ್ರತಿರೋಧಗಳು:

ಪ್ರಶ್ನೋತ್ತರಗಳು:

1) 1761-1799 ರ ನಡುವಿನ ಕಾಲಘಟ್ಟದಲ್ಲಿ ಕರ್ನಾಟಕವನ್ನು ಆಳಿದವರು ಯಾರು?
👉 ಹೈದರಾಲಿ ಮತ್ತು ಅವನ ಮಗ ಟೀಪ್ಪು ಸುಲ್ತಾನರು

2) ಭಾರತದ ಚರಿತ್ರೆಯಲ್ಲಿ ಎಷ್ಟನೇ ಶತಮಾನವನ್ನು ‘ರಾಜಕೀಯ ಸಮಸ್ಯೆಗ¼ ಶತಮಾನ’ ವೆಂದೇ ಚಿತ್ರಿಸಲ್ಪಟ್ಟಿದೆ.
👉 18ನೇ ಶತಮಾನ

3) ಭಾರತದ ಚರಿತ್ರೆಯಲ್ಲಿ 18 ನೇಶತಮಾನ ‘ರಾಜಕೀಯ ಸಮಸ್ಯೆಗಳ ಶತಮಾನ’ ವೆಂದೇ ಚಿತ್ರಿಸಲ್ಪಟ್ಟಿದೆ. ಇದಕ್ಕೆ ಅನೇಕ ಕಾರಣವೇನು?
👉 ಮೊಘಲ್‍ಚಕ್ರವರ್ತಿ ಔರಂಗಜೇಬ್‍ನ ಮರಣ (1707)
👉 ಮೈಸೂರು ರಾಜ್ಯದ ಚಿಕ್ಕದೇವರಾಜ ಒಡೆಯರ ಮರಣ (1704)

4) ಹೈದರಾಲಿಯು ಹೇಗೆ ಅಧಿಕಾರಕ್ಕೆ ಬಂದನು?
👉ಇವನು ಒಬ್ಬ ಸಾಮಾನ್ಯ ಸೈನಿಕನಾಗಿ ಮೈಸೂರು ರಾಜ್ಯದ ಸೇವೆಗೆ ಸೇರಿದ ವ್ಯಕ್ತಿ ತನ್ನ ಚಾಣಾಕ್ಷ ರಾಜಕೀಯ ನಡೆಗೆ ಹೆಸರಾಗಿದ್ದನು.
👉ಮೈಸೂರಿನ ರಾಜಕೀಯ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಇವನು ದೇವನಹಳ್ಳಿ ಮುತ್ತಿಗೆ ಸಂದರ್ಭ ಮತ್ತು ಅರ್ಕಾಟಿನ ನಿಜಾಮನ ವಿಷಯಕ್ಕೆ ಸಂಬಂಧಿಸಿದ ಸೈನಿಕ ಕಾರ್ಯಾಚರಣೆಯಲ್ಲಿ ಪ್ರವರ್ಧಮಾನಕ್ಕೆ ಬಂದನು.

5) ಮೊದಲನೇ ಆಂಗ್ಲೋ ಮೈಸೂರು ಯುದ್ದವು 1767-69 ಯಾವ ಒಪ್ಪಂದದೊಂದಿಗೆ ಕೊನೆಯಾಯಿತು?
👉 ಮದ್ರಾಸ್ -1769

6) ಎರಡನೇ ಆಂಗ್ಲೋ ಮೈಸೂರು ಯುದ್ದವು 1780- 1784 ಯಾವ ಒಪ್ಪಂದದೊಂದಿಗೆ ಕೊನೆಯಾಯಿತು?
👉 ಮಂಗಳೂರು - 1784

7) ಎರಡನೇ ಆಂಗ್ಲೋ ಮೈಸೂರು ಯುದ್ದ 1780-84 ಸಮಯದಲ್ಲಿದ್ದ ಗೌರ್ನರ್ ಜನರಲ್ ಯಾರು?
👉 ವಾರನ್ ಹೆಸ್ಟಿಂಗ್ಸ್

8) ಎರಡನೇ ಆಂಗ್ಲೋ ಮೈಸೂರು ಯುದ್ದ 1780-84 ಸಮಯದಲ್ಲಿದ್ದ ಬ್ರಿಟಿಷ್ ಸೇನೆಯ ಸೇನಾನಾಯಕ ಯಾರು?
👉 ಐರ್‍ಕೂಟ್

9) ಯಾವ ಯುದ್ದದ ನಂತರ ಹೈದರಾಲಿ ಮರಣ ಹೊಂದಿದನು?
👉1782 ರಲ್ಲಿ ಪುಲಿಕಾಟ್ ಮತ್ತು ಸೋಲಿಂಗೂರ್‍ಗಳ ಕದನದ ನಂತರ ಮರಣ ಹೊಂದಿದನು.

10) ಮೂರನೇ ಆಂಗ್ಲೋ ಮೈಸೂರು ಯುದ್ದಕ್ಕೆ ಮುಖ್ಯ ಕಾರಣವೇನು?
👉ತಿರುವಾಂಕೂರು ರಾಜ್ಯದ ರಾಜ ನೆರೆಯ ಕೊಚ್ಚಿ ಸಂಸ್ಥಾನದಲ್ಲಿ ಬ್ರಿಟಿಷರ ಬೆಂಬಲದಿಂದ ಕೋಟೆಯನ್ನು ನಿರ್ಮಿಸಿದನು ಮತ್ತು
👉ಆತನು ಡಚ್ಚರಿಂದ ಆಯಕೋಟಾ ಮತ್ತು ಕಾಂಗನೂರು ಕೋಟೆಗಳನ್ನು ಪಡೆದುಕೊಂಡಿದ್ದನು.
👉ಇದು ಮಂಗಳೂರು ಒಪ್ಪಂದದ ಷರತ್ತುಗಳ ಉಲ್ಲಂಘನೆಯಾಗಿತ್ತು.

11) ಮೂರನೆ ಆಂಗ್ಲೋ ಮೈಸೂರು ಯುದ್ದ  ಸಮಯದಲ್ಲಿದ್ದ ಗೌರ್ನರ್ ಜನರಲ್ ಯಾರು?
👉 ಲಾರ್ಡ ಕಾರನ್‍ವಾಲೀಸ್

12) ಮೂರನೆ ಆಂಗ್ಲೋ ಮೈಸೂರು ಯುದ್ದವು 1790-1792 ಯಾವ ಒಪ್ಪಂದದೊಂದಿಗೆ ಕೊನೆಯಾಯಿತು?
👉ಶ್ರೀರಂಗಪಟ್ಟಣ - 1792

13) ಶ್ರೀರಂಗಪಟ್ಟಣ ಒಪ್ಪಂದದ ಷರತ್ತುಗಳೇನು?
👉ಟಿಪ್ಪು ತನ್ನ ಅರ್ಧ ರಾಜ್ಯವನ್ನು ಬಿಟ್ಟುಕೊಡುವುದು
👉ಮೂರು ಕೋಟಿ ರೂಪಾಯಿಗಳನ್ನು ಯುದ್ಧನಷ್ಟ ಭರ್ತಿಯಾಗಿ ಕೊಡುವುದು,
👉ಯುದ್ಧನಷ್ಟ ಭರ್ತಿಗೆ ಗ್ಯಾರಂಟಿಯಾಗಿ ತನ್ನ ಇಬ್ಬರು ಗಂಡು ಮಕ್ಕಳನ್ನು ಒತ್ತೆಯಾಗಿ ನೀಡುವುದು,
👉ಯುದ್ಧದ ಸಂದರ್ಭದಲ್ಲಿ ಸೆರೆ ಹಿಡಿಯಲಾಗಿದ್ದ ಸೈನಿಕರನ್ನು ಬಿಡುಗಡೆಗೊಳಿಸುವುದು.

14) ನಾಲ್ಕನೆ ಆಂಗ್ಲೋ ಮೈಸೂರು ಯುದ್ದ  ಸಮಯದಲ್ಲಿದ್ದ ಗೌರ್ನರ್ ಜನರಲ್ ಯಾರು?
👉ಲಾರ್ಡ ವೆಲ್ಲೆಸ್ಲಿ

15) ಟಿಪ್ಪು ಸುಲ್ತಾನ್ ಮರಣ ಹೊಂದಿದ ವರ್ಷ?
👉1799

16) ಟಿಪ್ಪು ಮರಣದ ನಂತರ ಮೈಸೂರನ್ನು ಯಾರಿಗೆ ಹಸ್ತಾಂತರಿಸಲಾಯಿತು?
👉3ನೇ ಕೃಷ್ಣರಾಜ ಒಡೆಯರ್

17) ಕರ್ನಾಟಕದ ಪ್ರಮುಖ ಸಶಸ್ತ್ರ ಬಂಡಾಯಗಳು ಯಾವುವು?
👉ದೋಂಡಿಯಾ ವಾಘ್ (1800)
👉ಕಿತ್ತೂರಿನ ಬಂಡಾಯ - ವೀರರಾಣಿ ಚೆನ್ನಮ್ಮ (1824)
👉ಸಂಗೊಳ್ಳಿ ರಾಯಣ್ಣ  (1829-30)
👉ಅಮರ ಸುಳ್ಯ ಬಂಡಾಯ
👉ಸುರಪುರ ಮತ್ತು ಕೊಪ್ಪಳ ಬಂಡಾಯ
👉ಹಲಗಲಿಯ ಬೇಡರ ದಂಗೆ 

18) ದೋಂಡಿಯಾ ವಾಘ್ ಎಲ್ಲಿ ಜನಿಸಿದನು?

👉ದೋಂಡಿಯಾ ಚನ್ನಗಿರಿಯ ಮರಾಠ ಕುಟುಂಬದಲ್ಲಿ ಜನಿಸಿದನು.

19) ದೋಂಡಿಯಾ ವಾಘ್ ದಂಗೆಯನ್ನು ನಿಯಂತ್ರಸಿದ ಗೌರ್ನರ್ ಜನರಲ್ ಯಾರು?
👉ಲಾರ್ಡ್ ವೆಲ್ಲೆಸ್ಲಿ

20) ದೋಂಡಿಯಾ ವಾಘ್ ಹತ್ಯೆಗೈದ ಸ್ಥಳ?
👉ಕೋನ್‍ಗಲ್

21) ಕಿತ್ತೂರಿನ ರಾಣಿ ಚೆನ್ನಮ್ಮ ಬ್ರಿಟಿಷರ ವಿರುದ್ದ ಹೋರಾಡಲು ಕಾರಣವೇನು?
👉ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿಯನ್ನು ವಿರೋಧಿಸಿ

22) ಕಿತ್ತೂರಿನ ರಾಣಿ ಚೆನ್ನಮ್ಮ ದತ್ತು ಪಡೆದ ಮಗನ ಹೆಸರೇನು?
👉ಶಿವಲಿಂಗಪ್ಪ

23) ಕಿತ್ತೂರಿನ ಬಂಡಾಯದ ಸಮಯದಲ್ಲಿದ್ದ ಧಾರವಾಡದ ಕಲೆಕ್ಟರ್ ಮತ್ತು ಪೊಲಿಟಿಕಲ್ ಏಜೆಂಟನಾಗಿದ್ದನು ಯಾರು?
👉 ಥ್ಯಾಕರೆ

24) ಕಿತ್ತೂರಿನ ರಾಣಿ ಚೆನ್ನಮ್ಮನನ್ನು ಎಲ್ಲಿ ಬಂಧಿಸಿ ಇಡಲಾಗಿತ್ತು?
👉 ಬೈಲಹೊಂಗಲ ಕೋಟೆ

25) ಕಿತ್ತೂರು ರಾಣಿ ಚೆನ್ನಮ್ಮ__ಎಂಬ ಹುಡುಗನನ್ನು ದತ್ತು ಪಡೆದಿದ್ದಳು.
👉 ಶಿವಲಿಂಗಪ್ಪ

26) ಕಿತ್ತೂರಿಗೆ ಮುತ್ತಿಗೆ ಹಾಕಿದ್ದ ಬ್ರಿಟಿಷ್ ಸೈನ್ಯದ ನಾಯಕ ಅಥವಾ ಲೆಫ್ಟಿನೆಂಟ್ ಯಾರು?
👉 ಲೆಫ್ಟಿನೆಂಟ್ ಕರ್ನಲ್ ಡೀಕ್

27) ಕಿತ್ತೂರಿನ ರಾಜ್ಯಾಡಳಿತದ ವಿಚಾರದಲ್ಲಿ ಥಾಮಸ್ ಮನ್ರೋವಿನ ಪಾತ್ರವೇನು?
👉 ಶಿವಲಿಂಗರುದ್ರಸರ್ಜ ಮರಾಠರ ಯುದ್ಧದಲ್ಲಿ ಬ್ರಿಟಿಷರಿಗೆ ಸಹಾಯವನ್ನು ನೀಡಿದ್ದನು.
👉 ಇದರಿಂದಾಗಿ ಬ್ರಿಟಿಷರು ಆ ಸಂಸ್ಥಾನವನ್ನು ವಂಶಪಾರಂಪರ್ಯವಾಗಿ ಆತನಿಗೆ ನೀಡಿದ್ದು       ಪ್ರತಿಯಾಗಿ ವಾರ್ಷಿಕ ಕಾಣಿಕೆಯನ್ನು ಪಡೆದುಕೊಳ್ಳುವಂತಾಯಿತು.
👉ಈ ಒಪ್ಪಂದ ಥಾಮಸ್ ಮನ್ರೋನ ಕಾಲದಲ್ಲಿ ಜಾರಿಗೊಳಿಸಲ್ಪಟ್ಟಿತು.

28) ಸಂಗೊಳ್ಳಿ ರಾಯಣ್ಣ ಯಾರು?
👉 ಕಿತ್ತೂರಿನ ಸ್ವಾತಂತ್ರ್ಯಕ್ಕಾಗಿ ಹೋರಾಡುವುದು ತನ್ನ ಆದ್ಯ ಕರ್ತವ್ಯವೆಂದು ಭಾವಿಸಿದ್ದ ವೀರಯೋದ  ಕಿತ್ತೂರು ಸಂಸ್ಥಾನದ ಸೈನಿಕ

29) ರಾಯಣ್ಣನನ್ನು ಬಂಧಿಸಲು ಬ್ರಿಟಿಷರು ರೂಪಿಸಿದ ಸಂಚು ಏನು?

👉 ಕಿತ್ತೂರಿನ ಚೆನ್ನಮ್ಮಳನ್ನು ವಿರೋಧಿಸುತ್ತಿದ್ದ ದೇಸಾಯಿಗಳನ್ನು ಪ್ರಚೋದಿಸಿದರು.
👉 ಅಮಲ್ದಾರನಾಗಿದ್ದ ಕೃಷ್ಣರಾಯ ಎಂಬುವವನು ಈ ಸಂಚಿಗೆ ಕೈ ಜೋಡಿಸಿದನು.
👉 ಸಂಚಿಗೆ ಬಲಿಯಾದ ರಾಯಣ್ಣನನ್ನು ಇಂಗ್ಲಿಷ್ ಸೈನ್ಯ ಬಂಧಿಸಿ ಧಾರವಾಡಕ್ಕೆ ತಂದಿತು.

30) ಸಂಗೊಳ್ಳಿ ರಾಯಣ್ಣನನ್ನು ಎಲ್ಲಿ ಗಲ್ಲಿಗೇರಿಸಲಾಯಿತು?
👉 1831ರಲ್ಲಿ ನಂದಗಡದಲ್ಲಿ ರಾಯಣ್ಣನ್ನು ಗಲ್ಲಿಗೇರಿಸಲಾಯಿತು.

31) ಅಮರ ಸುಳ್ಯ ಬಂಡಾಯ ಇದು ಮೂಲತಃ ಎಂತಹ ಮಾದರಿಯ ಬಂಡಾಯ?

👉 ಇದು ಮೂಲತಃ ರೈತ ಬಂಡಾಯ

32) ಅಮರ ಸುಳ್ಯ ಬಂಡಾಯವನ್ನು ಸಂಘಟಿಸಿದವರು ಯಾರು?
👉 ಕೊಡಗಿನಲ್ಲಿ ಸ್ವಾಮಿಅಪರಾಂಪರ, ಕಲ್ಯಾಣಸ್ವಾಮಿ ಮತ್ತು ಪುಟ್ಟಬಸಪ್ಪ ಸಶಸ್ತ್ರ ಬಂಡಾಯವನ್ನು ಸಂಘಟಿಸಿದರು.

33) ಕೊಡಗನ್ನು ಆಳಿದ ಕೊನೆಯ ಅರಸ ಯಾರು?
👉 ಹಾಲೇರಿ ರಾಜವಂಶದ ಚಿಕ್ಕವೀರರಾಜೇಂದ್ರ

34) ‘ಅಮರ ಸುಳ್ಯ’ ಬಂಡಾಯದ ಕೇಂದ್ರ ಸ್ಥಾನಗಳು ಯಾವುವು?
👉 ಕೆನರಾ ಪ್ರಾಂತ್ಯದ ಸುಳ್ಯ, ಬೆಳ್ಳಾರೆ ಮತ್ತು ಪುತ್ತೂರು

35) ಅಮರಸುಳ್ಯ ಬಂಡಾಯದ ವಿಚಾರದಲ್ಲಿ ಯಾರನ್ನು ಗಲ್ಲಿಗೇರಿಸಲಾಯಿತು?

👉 ಪುಟ್ಟಬಸಪ್ಪ, ಲಕ್ಷ್ಮಪ್ಪ, ಬಂಗರಸ, ಕೆದಂಬಾಡಿರಾಮಯ್ಯ ಗೌಡರು ಮತ್ತು ಗುಡ್ಡೆಮನೆ ಅಪ್ಪಯಗೌಡರು.

36) ಸಶಸ್ತ್ರ ಬಂಡಾಯ ಸುರಪುರ ಈಗ ಯಾವ ಜಿಲ್ಲೆಯಲ್ಲಿದೆ?
👉 ಸುರಪುರ ಈಗಿನ ಯಾದಗಿರಿ ಜಿಲ್ಲೆಯಲ್ಲಿದೆ.

37) 1842ರಲ್ಲಿ ಬ್ರಿಟಿಷರು ಯಾರನ್ನು ಸುರಪುರದ ಪೊಲಿಟಿಕಲ್ ಏಜೆಂಟನನ್ನಾಗಿ ನೇಮಿಸಲಾಯಿತು?

👉 ಮೆಡೋಸ್ ಟೇಲರ್.

38) ಸುರಪುರದ ಸಶಸ್ತ್ರ ಬಂಡಾಯದ ನಾಯಕನಾರು?
👉 ವೆಂಕಟಪ್ಪ ನಾಯಕ

39) ಕರ್ನಾಟಕದ ಚರಿತ್ರೆಯಲ್ಲಿ 1857ರ ಕ್ರಾಂತಿಯ ನಾಯಕನೆಂದೂ ಇತಿಹಾಸಕಾರರು ಯಾರನ್ನು ವರ್ಣಿಸಿದ್ದಾರೆ?
👉 ವೆಂಕಟಪ್ಪ ನಾಯಕ

40) ಕೊಪ್ಪಳದ ಸಶಸ್ತ್ರ ಬಂಡಾಯದ ನಾಯಕನಾರು?
👉 ಕೊಪ್ಪಳದ ಜಮೀನ್ದಾರರಾಗಿದ್ದ  ವೀರಪ್ಪನವರು.

41) ಕೊಪ್ಪಳದ ಜಮೀನ್ದಾರನಾಗಿದ್ದ  ವೀರಪ್ಪನವರು ದಂಗೆ ಏಳಲು ಕಾರಣವೇನು?
👉 ಹೈದರಾಬಾದ್ ನಿಜಾಮನ ದೌರ್ಜನ್ಯ ಆಡಳಿತದಿಂದ ಬೇಸತ್ತು ದಂಗೆ ಏಳಲು ಕಾರಣವಾಯಿತು.

42) ಹಲಗಲಿಯ ಬೇಡರ ದಂಗೆಗೆ ಪ್ರಸಿದ್ದವಾಗಿದ್ದ ಹಲಗಲಿ ಈಗ ಯಾವ ಜಿಲ್ಲೆಯಲ್ಲಿದೆ?
👉 ಬಾಗಲಕೋಟೆ ಜಿಲ್ಲೆ ಮುದೋಳ ತಾಲ್ಲೂಕಿನಲ್ಲಿದೆ

 ಸಾಧನಾ ಅಕಾಡೆಮಿ, ಶಿಕಾರಿಪುರ.

Study + Steady + Sadhana = SucceSS SADHANA MODEL TEST - 50 1. ಕೆಳಗಿನವುಗಳಲ್ಲಿ ಹ್ರಸ್ವಸ್ವರಗಳಿಗೆ ಉದಾಹರಣೆ ಯಾವುದು? a) ಕ ಖ ಗ ಘ b) ಆ ಈ ಊ ಏ ಐ ಓ ಔ c) ...