Thursday, September 20, 2018

G.K. ಮಾದರಿ ಪರೀಕ್ಷೆ-13 (20/9/18)

We Are Builder of Healthy Society

ಸಾಧನಾ ಸ್ಪರ್ಧಾ ಅಕಾಡೆಮಿ,  ಶಿಕಾರಿಪುರ. 9449610920.
G.K. ಮಾದರಿ ಪರೀಕ್ಷೆ-13 (20/9/18)
20 ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿರಿ.
ಉತ್ತರವನ್ನು ಒಂದು ದಿನದ ನಂತರ ಪ್ರಕಟಿಸಲಾಗುವುದು.

1)  ಈವರೆಗೆ ಲಭ್ಯವಾಗಿರುವಂತೆ ಕನ್ನಡದಲ್ಲಿ ರಚಿಸಲಾದ ಮೊದಲನೇ ಶಾಸನ,          
ಅ) ಚಂದ್ರವಳ್ಳಿ ಶಾಸನ               
ಆ) ಬಾದಮಿ ಶಾಸನ                  
ಇ) ತಾಳಗುಂದ ಶಾಸನ         
ಈ)  ಹಲ್ಮಿಡಿ ಶಾಸನ    

2) ವಿಶ್ವದ ಏಕೈಕ ಏಕಶಿಲಾ ಕೈಲಾಸನಾಥ ದೇಗುಲವನ್ನು ನಿರ್ಮಿಸಿದ ರಾಷ್ಟ್ರಕೂಟ ದೊರೆ
ಅ) ಧ್ರುವ                                  
ಆ) ಅಮೋಘವರ್ಷ ನೃಪತುಂಗ   
ಇ) ಮೂರನೇ ಗೋವಿಂದ            
ಈ) ಒಂದನೇ ಕೃಷ್ಣ

3) ಮಕ್ಕಳಿಗೆ ಪ್ರೀತಿಯ  ಕನ್ನಡದ “ಪಂಚತಂತ್ರ” ಕತೆಗಳನ್ನು ಬರೆದವನು
ಅ) ರನ್ನ                          
ಆ) ದುರ್ಗಸಿಂಹ                         
ಇ) ವಿಜ್ಣಾನೇಶ್ವರ              
ಈ)  ಬಿಲ್ಹಣ  

4) ದ್ವಾರ ಸಮುದ್ರದ ಮೇಲೆ ಧಾಳಿ ಕೈಗೊಂಡ ದಂಡನಾಯಕ,
ಅ) ಅಲ್ಲಾವುದ್ದೀನ್  ಖಿಲ್ಜಿ              
ಆ) ಮಲ್ಲಿಕಾಫರ್                        
ಇ)  ಮಹ್ಮರ್ ಬಿನ್ ತೊಘಲಕ್     
ಈ)ಮಹ್ಮದ್ ಘಜ್ನಿ

5) ಚೋಳರು ಗ್ರಾಮಾಡಳಿತಕ್ಕೆ ವಿಷೇಶ ಆದ್ಯತೆ ನೀಡಿದ್ದರು,ಕಾರಣ
ಅ) ಅವರ ಪ್ರಾಂತ್ಯದಲ್ಲಿ ಗ್ರಾಮಗಳು ಹೆಚ್ಚಿದ್ದವು                               
ಆ) ಅವರು ವಿಕೇಂದ್ರೀಕರಣ ನಂಬಿಕೆ ಹೊಂದಿದ ಮೊದಲಿಗರಾಗಿದ್ದರು
ಇ) ರಾಜನ ಜವಾಬ್ದಾರಿ ಕಡಿಮೆಗೊಳಿಸಲು ಬಯಸಿದರು                            
ಈ) ದ್ವಿಮುಖ ಸರ್ಕಾರ ಪದ್ದತಿಯನ್ನು ತರಲು ಪ್ರಯತ್ನಿಸಿದರು

6) ಬುದ್ಧನನ್ನು ವಿಗ್ರಹ ರೂಪದಲ್ಲಿ ಕೆತ್ತನೆ ಮಾದುವ ಗಾಂಧಾರ ಶಿಲ್ಪಕಲೆ ಆರಂಭವಾಗಿದ್ದು ಈ ರಾಜವಂಶದ ಆಳ್ವಿಕೆಯಲ್ಲಿ.
ಅ) ಗುಪ್ತರು                               
ಆ)ಶಾತವಾಹನರು                    
ಇ) ವರ್ಧನರು                           
ಈ) ಕುಷಾನರು

7) ಸಾಗರದಲ್ಲಿ ಅತ್ಯಂತ ಆಳವಾದ ಪ್ರದೇಶ (Deep Place)
ಅ)ಮೃತ ಸಮುದ್ರ                      
ಆ) ಮೊಜಾಂಬಿಕ್ ತಗ್ಗು               
ಇ) ಚಾಲೆಂಜರ್ ತಗ್ಗು                 
ಈ) ಮೇರಿಯಾನ ತಗ್ಗು

8) ಅತಿಹೆಚ್ಚು ಕಬ್ಬಿಣಾಂಶ ಹೊಂದಿರುವ ಕಬ್ಬಿಣದ ಅದಿರು
ಅ) ಮಾಗ್ನಟೈಟ್              
ಆ) ಹೆಮಟೈಟ್                          
ಇ) ಲಿಮೊನೈಟ್               
ಈ) ಸಿಡರೈಟ್

9) ’ತಲಾ ವರಮಾನ’ ಎಂದರೆ,
ಅ) ಪ್ರತಿಯೊಬ್ಬ ನಾಗರೀಕನು ಗಳಿಸುವ ಆದಾಯ                                                ಆ)ಉದ್ಯೋಗ ದೊರೆತವರು ಗಳಿಸುವ ಆದಾಯ
ಇ) ರಾಷ್ಟ್ರೀಯ ವರಮಾನವನ್ನು- ರಾಷ್ಟ್ರದ  ಜನಸಂಖ್ಯೆಯಿಂದ ಭಾಗಿಸಿದಾಗ ಬರುವ ಆದಾಯ     
ಈ) ಪ್ರತಿಯೊಬ್ಬ ವ್ಯಕ್ತಿಯಿಂದ ರಾಷ್ಟ್ರಕ್ಕೆ ಬರುವ ಆದಾಯ

10) ಭಾರತವು ಈ ಬಗೆಯ ಆರ್ಥಿಕ ವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ.
ಅ) ಬಂಡವಾಳಷಾಹಿ                  
ಆ) ಸಮತಾವಾದ                      
ಇ) ಸಮಾಜವಾದ                      
ಈ) ಮಿಶ್ರ ವ್ಯವಸ್ಥೆ

11) ಭಾರತದ ನಿರ್ಧರಿತ ವೇಳೆಯು ಗ್ರೀನ್‍ವಿಚ್ ವೇಳೆಗಿಂತ ಎಷ್ಟು ಗಂಟೆ ವ್ಯತ್ಯಾಸ ಹೊಂದಿದೆ,
ಎ) 5 ಗಂಟೆ ಮುಂದಿದೆ                
ಬಿ) 5 1/2 ಗಂಟೆ ಮುಂದಿದೆ          
ಸಿ) 5 ಗಂಟೆ ಹಿಂದಿದೆ                   
ಡಿ) 5 1/2 ಗಂಟೆ ಹಿಂದಿದೆ
 
12) ಭಾರತವು ಈ ಮಾದರಿಯ ವಾಯುಗುಣವನ್ನು ಹೊಂದಿದೆ,
ಎ) ಸಮಭಾಜಕ ವೃತ್ತ ವಾಯುಗುಣ        
ಬಿ) ಮಾನ್ಸೂನ್ ವಾಯುಗುಣ
ಸಿ) ಮೆಡಿಟರೇನಿಯನ್ ವಾಯುಗುಣ  
ಡಿ) ತಂಪಾದ ಸಮಶೀತೊಷ್ಣ ವಾಯುಗುಣ

13) ಮಹಮ್ಮದ್ ಗವಾನ್ ಕಟ್ಟಸಿರುವ ಮದ್ರಸಾ ಇರುವ ಸ್ಥಳ,
ಎ) ಬೀದರ್                     
ಬಿ) ಗುಲ್ಬರ್ಗಾ                  
ಸಿ) ಬಿಜಾಪುರ                  
ಡಿ) ಗೋಲ್ಕಂಡ

14) ಮೊಘಲ್ ಆಳ್ವಿಕೆಯ ಕಾಲದಲ್ಲಿ (1526-1857) ಆಫ್ಘನ್ ಸಂತತಿಯ ವ್ಯಕ್ತಿಯೊಬ್ಬ ಅಧಿಕಾರ ನಡೆಸಿದ. ಆತ,
ಎ) ಹುಮಾಯುನ್ 
ಬಿ) ಅಲಂಗೀರ್                
ಸಿ) ಶೇರಷಾ          
ಡಿ) ಔರಂಗಜೇಬ್

15) ‘ಹೇಬಿಯಸ್ ಕಾರ್ಪಸ್’ ರಿಟ್ ಆದೇಶ ಹೊರಡಿಸುವ ಅಧಿಕಾರ ಹೊಂದಿರುವವರು/ವುದು,
ಎ) ಸುಪ್ರೀಂ ಕೋರ್ಟ್       
ಬಿ) ಹೈಕೋರ್ಟ್ & ಸುಪ್ರೀಂ ಕೋರ್ಟ್     
ಸಿ) ಹೈಕೋರ್ಟ್               
ಡಿ) ಅಧೀನ ನ್ಯಾಯಾಲಯ

16) ಪ್ರಸ್ತುತ ಭಾರತದಲ್ಲಿ ಯಾವ ನೀರಾವರಿ ಪದ್ಧತಿ ಅತಿ ಹೆಚ್ಚು ಬಳಕೆಯಲ್ಲಿದೆ.
ಅ) ಬಾವಿ ನೀರಾವರಿ         
ಆ) ಕೆರೆ ನೀರಾವರಿ           
ಇ) ಕಾಲುವೆ ನೀರಾವರಿ               
ಈ) ಹನಿ ನೀರಾವರಿ

17. ಸರ್ದಾರ್ ವಲ್ಲಭಭಾಯಿ ಪಟೇಲರು ‘ಪೊಲೀಸ್ ಕಾರ್ಯಾಚರಣೆ’ ಕೈಗೊಂಡು ಭಾರತದ ಒಕ್ಕೂಟಕ್ಕೆ ಸೇರಿಸಿಕೊಂಡ ಸಂಸ್ಥಾನ
ಅ) ಜುನಾಗಢ                 
ಆ) ಜಮ್ಮು ಮತ್ತು ಕಾಶ್ಮೀರ          
ಇ) ಮೈಸೂರು                 
ಈ) ಹೈದರಾಬಾದ್

18. ವಿಶಾಲ ಮೈಸೂರು ರಾಜ್ಯವು ಜನ್ಮ ತಾಳಿದ ದಿನ
ಅ) ನವೆಂಬರ್ 1, 1956    
ಆ) ಆಗಸ್ಟ್ 14, 1947       
ಇ) ನವೆಂಬರ್ 1, 1973              
ಈ) ಆಗಸ್ಟ 15, 1947

19) ಮೊದಲ ವಿಶ್ವ ಯುದ್ಧದ ನಂತರ ಖಾಯಂ ಆಗಿ ಶಾಂತಿಯನ್ನು ನೆಲೆಸುವಂತೆ ಯಾವ ಸಂಸ್ಥೆಯನ್ನು ಸ್ಥಾಪಿಸಲಾಯಿತು?
ಅ) ರೆಡ್ ಕ್ರಾಸ್ ಸಂಸ್ಥೆ         
ಆ) ಆಮ್ನೆಸ್ಟಿ ಇಂಟರ್ ನ್ಯಾಷನಲ್  
ಇ) ರಾಷ್ಟ್ರಗಳ ಸಂಘ         
ಈ) ವಿಶ್ವಸಂಸ್ಥೆ

20.     ನದಿ ನಿರ್ವಹಣೆಯು ಕೇಂದ್ರ ಮತ್ತು ರಾಜ್ಯ ಪಟ್ಟಿಗಳೆರಡರಲ್ಲೂ ಇರುವುದು ಇಂದಿನ ಸಮಸ್ಯೆಯಾಗಿದೆ. ಇದರ ಸಂಖ್ಯೆ ಕ್ರಮವಾಗಿ,
ಎ) ಕೇಂದ್ರ ಪಟ್ಟಿ – 56, ರಾಜ್ಯ ಪಟ್ಟಿ – 17.                   
ಬಿ) ಕೇಂದ್ರ ಪಟ್ಟಿ – 46, ರಾಜ್ಯ ಪಟ್ಟಿ – 37.
ಸಿ) ಕೇಂದ್ರ ಪಟ್ಟಿ – 56, ರಾಜ್ಯ ಪಟ್ಟಿ – 27.                   
ಡಿ) ಕೇಂದ್ರ ಪಟ್ಟಿ – 17, ರಾಜ್ಯ ಪಟ್ಟಿ – 56.

24 comments:

  1. Mental ability questions kalsi sir please

    ReplyDelete
  2. Thanks sir & your group 🙏🙏🙏🙏🙏🙏🙏👌👌👌👌👌🤝

    ReplyDelete
  3. It's very useful self evaluating,,,,thank you

    ReplyDelete
  4. sir you already question elle
    Nodini evathe

    ReplyDelete

Study + Steady + Sadhana = SucceSS SADHANA MODEL TEST - 61 1. ಎರಡನೇ ಬೌದ್ಧ ಪರಿಷತ್ತಿನ/ಸಭೆ ಕುರಿತು ಈ ಕೆಳಗಿನ ಯಾವ ಹೇಳಿಕೆಗಳು ನಿಜವಲ್ಲ? (Which of the...