We Are Builder of Healthy Society
ಸಾಧನಾ ಸ್ಪರ್ಧಾ ಅಕಾಡೆಮಿ, ಶಿಕಾರಿಪುರ. 9449610920.
G.K. ಮಾದರಿ ಪರೀಕ್ಷೆ-8 (15/9/18)
20 ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿರಿ.
ಸರಿಯುತ್ತರಗಳು
1) ಭಾರತೀಯ ಚುನಾವಣಾ ಆಯೋಗವು,
ಎ) ಒಂದು ಸಂವಿಧಾನಿಕ ಸಂಸ್ಥೆ.
ಬಿ) ಒಂದು ಸಂಸದೀಯ ಸಂಸ್ಥೆ.
ಸಿ) ಒಂದು ಶಾಸನೀಯ ಸಂಸ್ಥೆ.
ಡಿ) ಒಂದು ಕಾರ್ಯಾಂಗೀಯ ಸಂಸ್ಥೆ.
1) A
2) ಭಾರತದ ಚುನಾವಣಾ ಆಯೋಗದ ಸದಸ್ಯರ ಸಂಖ್ಯೆಯು,
ಎ) ಮೂರು ಇರಬೇಕು.
ಬಿ) ಒಂದು+ಎರಡು ಇರಬೇಕು.
ಸಿ) ಸಂಸತ್ತು ನಿರ್ಧರಿಸುತ್ತದೆ
ಡಿ) ಸಂವಿಧಾನ ನಿರ್ಧರಿಸಿದೆ.
2) C
3) ಭಾರತೀಯ ಚುನಾವಣಾ ಆಯೋಗವು ಈ ಚುನಾವಣೆಗಳನ್ನು ನಿರ್ವಹಿಸುತ್ತದೆ.
ಎ) ರಾಷ್ಟ್ರಪತಿ, ಉಪ ರಾಷ್ಟ್ರಪತಿ, ರಾಜ್ಯಪಾಲರು, ಲೋಕಸಭೆ, ರಾಜ್ಯಸಭೆ, ವಿಧಾನಸಭೆ ಮತ್ತು ವಿಧಾನಪರಿಷತ್.
ಬಿ) ರಾಷ್ಟ್ರಪತಿ, ಉಪ ರಾಷ್ಟ್ರಪತಿ, ಲೋಕಸಭೆ, ರಾಜ್ಯಸಭೆ, ವಿಧಾನಸಭೆ ಮತ್ತು ವಿಧಾನಪರಿಷತ್.
ಸಿ) ರಾಷ್ಟ್ರಪತಿ, ಉಪ ರಾಷ್ಟ್ರಪತಿ, ಲೋಕಸಭೆ, ರಾಜ್ಯಸಭೆ.
ಡಿ) ಲೋಕಸಭೆ, ರಾಜ್ಯಸಭೆ, ವಿಧಾನಸಭೆ ಮತ್ತು ವಿಧಾನಪರಿಷತ್
3) B
4) ರಾಜ್ಯ ಚುನಾವಣಾ ಆಯೋಗವು ಈ ಚುನಾವಣೆಗಳನ್ನು ನಿರ್ವಹಿಸುತ್ತದೆ.
ಎ) ರಾಜ್ಯಪಾಲರು, ರಾಜ್ಯಸಭೆ, ವಿಧಾನಸಭೆ ಮತ್ತು ವಿಧಾನಪರಿಷತ್.
ಬಿ) ವಿಧಾನಸಭೆ ಮತ್ತು ವಿಧಾನಪರಿಷತ್.& ಸ್ಥಳೀಯ ಸರ್ಕಾರಗಳು.
ಸಿ) ಕೇವಲ ಸ್ಥಳೀಯ ಸರ್ಕಾರಗಳು.
ಡಿ) ರಾಜ್ಯಸಭೆ, ವಿಧಾನಸಭೆ ಮತ್ತು ವಿಧಾನಪರಿಷತ್ ಮತ್ತು ಸ್ಥಳೀಯ ಸರ್ಕಾರಗಳು.
4) C
5) ಭಾರತದ ಚುನಾವನಾ ಆಯೋಗದ ಮುಖ್ಯಆಯುಕ್ತ , ರಾಜ್ಯದ
ಮುಖ್ಯ ಚುನಾವನಾ ಆಯುಕ್ತ , ಮತ್ತು ರಾಜ್ಯ
ಚುನಾವನಾ ಆಯೋಗದ ಅಧ್ಯಕ್ಷರು ಕ್ರಮವಾಗಿ,
ಎ) ಎಸ್.ವೈ.ಖುರೇಷಿ, ಸಿ.ಆರ್.ಚಿಕ್ಕಮಠ್, ಸಿ.ಎಸ್.ಸುರಂಜನ್.
ಬಿ) ಒ.ಪಿ. ರಾವತ್ , ಸಂಜೀವ್
ಕುಮಾರ್ , ಪಿ.ಎನ್.ಶ್ರೀನಿವಾಸಾಚಾರಿ,
ಸಿ) ನವೀನ್ ಚಾವ್ಲಾ, ಮ.ರಾ. ಹೆಗಡೆ. ಸಿ.ಆರ್.ಚಿಕ್ಕಮಠ್.
ಡಿ) ಒ.ಪಿ. ರಾವತ್, ಪಿ.ಎನ್.ಶ್ರೀನಿವಾಸಾಚಾರಿ, ಸಂಜೀವ್
ಕುಮಾರ್
5) B
6) ರಾಷ್ಟ್ರಪತಿ ಚುನಾವಣೆಯಲ್ಲಿ ಮತಚಲಾಯಿಸುವ ಅಧಿಕಾರ ಹೊಂದಿರುವವರು,
ಎ) ಲೋಕಸಭೆಯ ಎಲ್ಲಾ ಸದಸ್ಯರು, ರಾಜ್ಯಸಭೆಯ ಎಲ್ಲಾ ಸದಸ್ಯರು, ವಿಧಾನಸಭೆಯ ಎಲ್ಲಾ ಸದಸ್ಯರು, ಮತ್ತು ವಿಧಾನಪರಿಷತ್ನ ಎಲ್ಲಾ ಸದಸ್ಯರು,.
ಬಿ) ಲೋಕಸಭೆಯ ಚುನಾಯಿತ ಸದಸ್ಯರು, ರಾಜ್ಯಸಭೆಯ ಚುನಾಯಿತ ಸದಸ್ಯರು, ವಿಧಾನಸಭೆಯ ಚುನಾಯಿತ ಸದಸ್ಯರು, ಮತ್ತು ವಿಧಾನಪರಿಷತ್ನ ಚುನಾಯಿತ ಸದಸ್ಯರು,.
ಸಿ) ಲೋಕಸಭೆಯ ಚುನಾಯಿತ ಸದಸ್ಯರು, ರಾಜ್ಯಸಭೆಯ ಚುನಾಯಿತ ಸದಸ್ಯರು, ವಿಧಾನಸಭೆಯ ಚುನಾಯಿತ ಸದಸ್ಯರು.
ಡಿ) ಲೋಕಸಭೆಯ ಚುನಾಯಿತ ಸದಸ್ಯರು, ರಾಜ್ಯಸಭೆಯ ಚುನಾಯಿತ ಸದಸ್ಯರು, ವಿಧಾನಸಭೆಯ ಎಲ್ಲಾ ಸದಸ್ಯರು.
6) C
7) ಉಪ ರಾಷ್ಟ್ರಪತಿ ಚುನಾವಣೆಯಲ್ಲಿ ಮತಚಲಾಯಿಸುವ ಅಧಿಕಾರ ಹೊಂದಿರುವವರು,
ಎ) ಲೋಕಸಭೆಯ ಎಲ್ಲಾ ಸದಸ್ಯರು, ರಾಜ್ಯಸಭೆಯ ಎಲ್ಲಾ ಸದಸ್ಯರು, ವಿಧಾನಸಭೆಯ ಎಲ್ಲಾ ಸದಸ್ಯರು, ಮತ್ತು ವಿಧಾನಪರಿಷತ್ನ ಎಲ್ಲಾ ಸದಸ್ಯರು,.
ಬಿ) ಲೋಕಸಭೆಯ ಚುನಾಯಿತ ಸದಸ್ಯರು, ರಾಜ್ಯಸಭೆಯ ಚುನಾಯಿತ ಸದಸ್ಯರು, ವಿಧಾನಸಭೆಯ ಚುನಾಯಿತ ಸದಸ್ಯರು, ಮತ್ತು ವಿಧಾನಪರಿಷತ್ನ ಚುನಾಯಿತ ಸದಸ್ಯರು,.
ಸಿ) ಲೋಕಸಭೆಯ ಎಲ್ಲಾ ಸದಸ್ಯರು, ರಾಜ್ಯಸಭೆಯ ಎಲ್ಲಾ ಸದಸ್ಯರು, ವಿಧಾನಸಭೆಯ ಎಲ್ಲಾ ಚುನಾಯಿತ ಸದಸ್ಯರು.
ಡಿ) ಲೋಕಸಭೆಯ ಎಲ್ಲಾ ಸದಸ್ಯರು, ರಾಜ್ಯಸಭೆಯ ಎಲ್ಲಾ ಸದಸ್ಯರು.
7) D
8) ರಾಷ್ಟ್ರಪತಿ ಮತ್ತು ಉಪ ರಾಷ್ಟ್ರಪತಿ ಚುನಾವಣೆಯ ವಿವಾದ ಕುರಿತು ಸಮಸ್ಯೆಗಳನ್ನು ಇಲ್ಲಿ ಪ್ರಶ್ನಿಸಬಹುದು,
ಎ) ಸುಪ್ರೀಂ ಕೋರ್ಟ್
ಬಿ) ಭಾರತೀಯ ಚುನಾವಣಾ ಆಯೋಗ
ಸಿ) ಸುಪ್ರೀಂ ಕೋರ್ಟ್ & ಭಾರತೀಯ ಚುನಾವಣಾ ಆಯೋಗ
ಡಿ) ಸುಪ್ರೀಂ ಕೋರ್ಟ್ ಮತ್ತು ಎಲ್ಲಾ ರಾಜ್ಯಗಳ ಹೈ ಕೋರ್ಟ್
8) A
9) ರಾಷ್ಟ್ರಪತಿ ಚುನಾವಣೆಯಲ್ಲಿ,
ಎ) ಎಲ್ಲಾ ರಾಜ್ಯದ ಎಂ.ಎಲ್.ಎ ಗಳ ಮತ್ತು ಎಲ್ಲಾ ಎಂ.ಪಿ.ಗಳ ಮತದ ಮೌಲ್ಯ ಸಮಾನವಾಗಿರುತ್ತದೆ.
ಬಿ) ಎಲ್ಲಾ ಎಂ.ಪಿ.ಗಳ ಮತದ ಮೌಲ್ಯ ಸಮಾನವಾಗಿರುತ್ತದೆ.
ಸಿ) ಎಂ.ಎಲ್.ಎ ಗಳ ಮತದ ಮೌಲ್ಯ ವತ್ಯಾಸವಾಗುತ್ತದೆ ಮತ್ತು ಎಂ.ಪಿ.ಗಳ ಮತದ ಮೌಲ್ಯ ಸಮಾನವಾಗಿರುತ್ತದೆ
ಡಿ) ಎಲ್ಲಾ ರಾಜ್ಯದ ಎಂ.ಎಲ್.ಎ ಗಳ ಸಮಾನವಾಗಿರುತ್ತದೆ. ಮತ್ತು ಎಲ್ಲಾ ಎಂ.ಪಿ.ಗಳ ಮತದ ಮೌಲ್ಯ ವತ್ಯಾಸವಾಗುತ್ತದೆ
9) C
10) ಲೋಕಸಭೆಯ ಚುನಾವಣೆಗಾಗಿ ನಿಗದಿಯಾದ ಚುನಾವಣಾ ಕ್ಷೇತ್ರವು,
ಎ) ಪ್ರತಿ ಜಿಲ್ಲೆಗೆ ಒಂದರಂತೆ ಇರುತ್ತವೆ.
ಬಿ) ಜಿಲ್ಲೆಗಳಿಗಿಂತ ಲೋಕಸಭೆಯ ಚುನಾವಣಾ ಕ್ಷೇತ್ರಗಳು ಹೆಚ್ಚಿರುತ್ತವೆ.
ಸಿ) ಜಿಲ್ಲೆಗಳಿಗಿಂತ ಲೋಕಸಭೆಯ ಚುನಾವಣಾ ಕ್ಷೇತ್ರಗಳು ಹೆಚ್ಚಿಗೆ ಇರಬಹುದು ಅಥವಾ ಕಡಿಮೆ ಇರಬಹುದು.
ಡಿ) ಜಿಲ್ಲೆಗಳಿಗಿಂತ ಲೋಕಸಭೆಯ ಚುನಾವಣಾ ಕ್ಷೇತ್ರಗಳು ಕಡಿಮೆ ಇರಬಹುದು.
10) C
11) ಲೋಕಸಭಾ ಚುನಾವಣೆಯಲ್ಲಿ ಕೆಲವು ಕ್ಷೇತ್ರಗಳನ್ನು ಮೀಸಲಿಡಲಾಗುತ್ತದೆ. ಮೀಸಲಾತಿಯನ್ನು ಇವರಿಗೆ ಮಾತ್ರ ನೀಡಲಾಗಿದೆ.
ಎ) ಎಸ್.ಸಿ., ಎಸ್.ಟಿ., ಒ.ಬಿ.ಸಿ ಮತ್ತು ಮಹಿಳೆ.
ಬಿ) ಎಸ್.ಸಿ., ಎಸ್.ಟಿ., ಒ.ಬಿ.ಸಿ.
ಸಿ) ಎಸ್.ಸಿ., ಎಸ್.ಟಿ.
ಡಿ) ಎಸ್.ಸಿ., ಎಸ್.ಟಿ., ಮತ್ತು ಮಹಿಳೆ.
11) C
12) 15 ನೇ ಲೋಕಸಭೆ ಚುನಾವಣೆಯಲ್ಲಿ ಮರುವಿಂಗಡಣೆಯಾದ ಕ್ಷೇತ್ರಗಳಿಗೆ ಚುನಾವಣೆ ನಡೆಸಲಾಗುತ್ತಿದೆ. ಮರುವಿಂಗಡಣೆಗೆ ಆಧಾರವಾಗಿಟ್ಟುಕೊಂಡ ವರ್ಷವಂದರೆ,
ಎ) 2001
ಬಿ) 2005
ಸಿ) 2006
ಡಿ) 2008
12) A
13) 2008 ರಲ್ಲಿ ಘೋಷಿತವಾದ ಕ್ಷೇತ್ರ ಪುನರ್-ವಿಂಗಡಣಾ ಆಯೋಗದ ಅಧ್ಯಕ್ಷರು,
ಎ) ವೀರಪ್ಪ ಮೋಯ್ಲಿ
ಬಿ) ಕುಲದೀಪ್ ಸಿಂಗ್.
ಸಿ) ಎನ್.ಗೋಪಾಲ ಸ್ವಾಮಿ.
ಡಿ) ನವೀನ್ ಚಾವ್ಲಾ.
13) B
14) ವಿಧಾನಸಭೆಯೊಂದು ಹೊಂದಿರಬಹುದಾದ ಗರಿಷ್ಟ ಮತ್ತು ಕನಿಷ್ಟ ಸದಸ್ಯರ ಸಂಖ್ಯೆಯಿದು.
ಎ) 500 & 60
ಬಿ) 410 & 40
ಸಿ) 500 & 50
ಡಿ) 400 & 40
14) A
15) ಭಾರತದ ಲೋಕಸಭೆಯು ಹೊಂದಬಹುದಾದ ಗರಿಷ್ಟ ಸಂಖ್ಯೆ ಮತ್ತು ಹಾಲಿ ಇರುವ ಸಂಖ್ಯೆ ಕ್ರಮವಾಗಿ,
ಎ) 552 & 545
ಬಿ) 552 & 543
ಸಿ) 550 & 545
ಡಿ) 550 & 543
15) A
16) ಭಾರತದ ರಾಜ್ಯಸಭೆಯು ಹೊಂದಬಹುದಾದ ಗರಿಷ್ಟ ಸಂಖ್ಯೆ ಮತ್ತು ಹಾಲಿ ಇರುವ ಸಂಖ್ಯೆ ಕ್ರಮವಾಗಿ,
ಎ) 250 & 245
ಬಿ) 260 & 250
ಸಿ) 250 & 250
ಡಿ) 250 & 232
16) A
17) ಕರ್ನಾಟಕಕ್ಕೆ ನಿಗದಿಯಾಗಿರುವ ರಾಜ್ಯಸಭಾ ಸದಸ್ಯರ ಸಂಖ್ಯೆ,
ಎ) 12
ಬಿ) 15
ಸಿ) 20
ಡಿ) 16
17) A
18) ವಿಧಾನ ಪರಿಷತ್ ಸದಸ್ಯರ ಸಂಖ್ಯೆಯು,
ಎ) 75 ಮಾತ್ರ ಇರಬೇಕು.
ಬಿ) 100 ರ ಒಳಗಿದ್ದರೆ ಸಾಕು.
ಸಿ) ರಾಜ್ಯದ ವಿಧಾನಸಭೆಯ 1/3 ಯಷ್ಟಿರಬೇಕು.
ಡಿ) ರಾಜ್ಯದ ವಿಧಾನಸಭೆಯ 1/4 ರಷ್ಟಿರಬೇಕು.
18) C
19) ಸದ್ಯಕ್ಕೆ ವಿಧಾನ ಪರಿಷತ್ ಹೊಂದಿರುವ ರಾಜ್ಯಗಳ ಸಂಖ್ಯೆ,
ಎ) 5
ಬಿ) 6
ಸಿ) 7
ಡಿ) 8
19) C
20) ವಿಧಾನ ಪರಿಷತ್ನಲ್ಲಿ ಇಷ್ಟು ವಿಭಿನ್ನ ಕ್ಷೇತ್ರಗಳ ಪ್ರತಿನಿಧಿಗಳಿರುತ್ತಾರೆ.
ಎ) ಶಿಕ್ಷಕ, ಪದವೀಧರ, ಸ್ಥಳೀಯ ಸಂಸ್ಥೆ, ನಾಮಕರಣ.
ಬಿ) ಶಿಕ್ಷಕ, ಪದವೀಧರ, ಸ್ಥಳೀಯ ಸಂಸ್ಥೆ, ವಿಧಾನಸಭೆಯಿಂದ ಚುನಾಯಿತ ಮತ್ತು ನಾಮಕರಣ.
ಸಿ) ಶಿಕ್ಷಕ, ಪದವೀಧರ, ನಾಮಕರಣ.
ಡಿ) ಶಿಕ್ಷಕ, ಪದವೀಧರ, ಕಲೆ ಮತ್ತು ವಿಜ್ಞಾನ.
20) B
Thanks sir, valuable questions ......
ReplyDeleteThank you sir
ReplyDeleteStepana hawking
ReplyDeletequestions iddare share Madi sir
Super sir
ReplyDeleteTq sir
ReplyDeletethank u sir
ReplyDeleteThank u sir
ReplyDeletesuper.sir
ReplyDeleteSuper sir
ReplyDeletePresident and vice-president election is conducting by electrolcollege rite sir pls clarify question no 3 sir
ReplyDeletePresident & Vice President election also conducted by Central Election Commission
ReplyDeleteThanks alot sir..
ReplyDelete