We Are Builder of Healthy Society
ಸಾಧನಾ ಸ್ಪರ್ಧಾ ಅಕಾಡೆಮಿ, ಶಿಕಾರಿಪುರ. 9449610920.
G.K. ಮಾದರಿ ಪರೀಕ್ಷೆ-14
(21/9/18)
20 ಪ್ರಶ್ನೆಗಳಿಗೆ ಉತ್ತರಿಸಲು
ಪ್ರಯತ್ನಿಸಿರಿ.
ಉತ್ತರವನ್ನು ಒಂದು ದಿನದ ನಂತರ
ಪ್ರಕಟಿಸಲಾಗುವುದು.
ಮೆಂಟಲ್ ಎಬಿಲಿಟಿ ಟೆಸ್ಟ್
1. ಒಬ್ಬ
ವ್ಯಕ್ತಿಯು ಪೂರ್ವಕ್ಕೆ 3 ಕಿ. ಮೀ. ನಂತರ ಉತ್ತರಕ್ಕೆ 2 ಕಿ.ಮೀ. ಮತ್ತು ಪುನಃ ಪೂರ್ವಕ್ಕೆ 2 ಕಿ.
ಮೀ. ಹಾಗು ಕೊನೆಯದಾಗಿ ದಕ್ಷಿಣಕ್ಕೆ 14 ಕಿ. ಮೀ. ಚಲಿಸುತ್ತಾನೆ. ಈಗ ಅವನು ಪ್ರಾರಂಭದ ಸ್ಥಾನದಿಂದ
ಕನಿಷ್ಟ ಎಷ್ಟು ದೂರದಲ್ಲಿದ್ದಾನೆ ?
(1) 12 ಕಿ. ಮೀ.
(2) 13 ಕಿ. ಮೀ.
(3) 15 ಕಿ. ಮೀ.
(4) 17 ಕಿ. ಮೀ.
2. ಒಂದು
ತರಗತಿಯಲ್ಲಿ ರಾಧಾ ಮೇಲಿನಿಂದ 6 ನೇ ಸ್ಥಾನದಲ್ಲಿದ್ದಾಳೆ. ಹರ್ಷ ಕೆಳಗಿನಿಂದ 18 ನೇಸ್ಥಾನದಲ್ಲಿದ್ದಾನೆ.
ಮಧುರಾಧಾಳಿಗಿಂತ 14ಸ್ಥಾನಕೆಳಗಿದ್ದಾನೆ. ಹರ್ಷನಿಗಿಂತ 15 ಸ್ಥಾನ ಮೇಲಿದ್ದಾನೆ. ತರಗತಿಯಲ್ಲಿ ಎಷ್ಟು
ವಿದ್ಯಾರ್ಥಿಗಳಿದ್ದಾರೆ ?
(1) 55
(2) 53
(3) 52
(4) 75
3) ಅಂಕಿ 0,1,2,3,4 ಇವುಗಳನ್ನು ಪುನರಾವರ್ತಿಸದೆ ಉಪಯೋಗಿಸಿ
5 ಅಂಕಿಗಳ ಸಂಖ್ಯೆಗಳನ್ನು ಮಾಡಿದಾಗ ಸಿಗುವ ಅತೀ ದೊಡ್ಡ ಮತ್ತು ಅತೀ ಚಿಕ್ಕ ಸಂಖ್ಯೆಗಳ ವ್ಯತ್ಯಾಸ
ಎ) 32976
ಬಿ) 32966
ಸಿ) 33776
ಡಿ) 33987
4) 50 ಮೀ ಉದ್ದದ ರೈಲುಗಾಡಿಯು, 100 ಮೀ ಉದ್ದದ ತಂಗುದಾಣವನ್ನು
10 ಸೆಕೆಂಡುಗಳಲ್ಲಿ ದಾಟಿದರೆ, ಆ ರೈಲಿನ ವೇಗ (ಕಿ.ಮೀ/ಗಂ.)
ಎ) 52
ಬಿ) 54
ಸಿ) 56
ಡಿ) 50
5) ರಾಧಾಳು ತನ್ನ ಅಜ್ಜಿ ಗಿಂತ 6 ಪಟ್ಟು ಚಿಕ್ಕವಳು, ಮತ್ತು
ತನ್ನ ತಾಯಿಗಿಂತ 3 ಪಟ್ಟು ಚಿಕ್ಕವಳು. ರಾಧಳ ತಂದೆಯು
ಈಗ 50ಕ್ಕೆ ಎರಡು ವರ್ಷ ಕಡಿಮೆಯನಾಗಿದ್ದು ಆತನ ತಾಯಿಗೆ 24 ವರ್ಷವಾಗಿದ್ದಾಗ ಜನಿಸಿದ್ದನು. ಹಾಗಾದರೆ
ರಾಧಾಳ ವಯಸ್ಸು ಎಷ್ಟು?
ಎ) 8
ಬಿ) 10
ಸಿ) 12
ಡಿ) 14
6. ಒಬ್ಬಾತನ
ಬಳಿ ಕೋಳಿ ಮತ್ತು ಕುರಿ ಸೇರಿದಂತೆ 128 ಕಾಲುಗಳು, ಮತ್ತು 82 ಕಣ್ಣುಗಳು ಇವೆ. ಹಾಗಾದರೆ ಆತನ ಬಳಿ
ಇರುವ ಕೋಳಿ ಮತ್ತು ಕುರಿಗಳ ಸಂಖ್ಯೆ ಕ್ರಮವಾಗಿ,
ಎ) 20 & 21
ಬಿ) 18
& 23
ಸಿ) 23 & 18
ಡಿ) 21 & 20
7. ಒಂದು
ಕ್ರಿಕೆಟ್ ತಂಡವು ವರ್ಷದಲ್ಲಿ ಆಡಿದ ಪಂದ್ಯಾವಳಿಗಳಲ್ಲಿ ಶೇ.40 ಪಂದ್ಯಗಳಲ್ಲಿ ಗೆದ್ದು, ಶೇ 50 ಪಂದ್ಯಗಳಲ್ಲಿ ಸೋತು, 20 ಪಂದ್ಯಗಳನ್ನು ಸಮ ಮಾಡಿಕೊಂಡರೆ, ಆ ಕ್ರಿಕೆಟ್
ತಂಡ ಆ ವರ್ಷದಲ್ಲಿ ಆಡಿದ ಪಂದ್ಯಗಳೆóಷ್ಟು ?
(1) 400
(2) 360
(3) 280
(4) 200
8) ಒಂದು
ರೈಲು 250 ಮೀ ಉದ್ದವಿದ್ದು ಟೆಲಿಗ್ರಾಫ್ ಕಂಬವೊಂದನ್ನು ದಾಟಲು 15 ಸೆಕೆಂಡ್ ತೆಗೆದು ಕೊಂಡಿತು.ಅದೇ
ರೈಲು 500 ಮೀಟರ್ ಉದ್ದದ ಫ್ಲಾಟ್ ಫಾರ್ಮ ದಾಟಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ?
ಎ) 60 ಸೆ.
ಬಿ) 30 ಸೆ.
ಸಿ) 75 ಸೆ.
ಡಿ) 45 ಸೆ.
9) ಒಂದು
20 X 20 ಅಡಿ ಅಳತೆಯ ಬಟ್ಟೆಯನ್ನು ಕನಿಷ್ಟ ಎಷ್ಟು ಬಾರಿ ಮಡಿಚಿದಾಗ ಅದರ ಸುತ್ತಳತೆಯು 25 ಅಡಿಗಿಂತ
ಕಡಿಮೆ ಇರುತ್ತದೆ?
ಎ) 10
ಬಿ) 6
ಸಿ) 3
ಡಿ) 4
10) 10
ಜನರು 20 ದಿನದಲ್ಲಿ ದಿನಕ್ಕೆ 5 ಗಂಟೆ ಕೆಲಸ ಮಾಡುತ್ತಾ 15 ಗುಂಡಿ ತೋಡಬಲ್ಲರು. ಹಾಗಾದರೆ,15 ಜನರು
28 ದಿನದಲ್ಲಿ ದಿನಕ್ಕೆ 10 ಗಂಟೆ ಕೆಲಸ ಮಾಡುತ್ತಾ ಎಷ್ಟು ಗುಂಡಿ ತೋಡಬಲ್ಲರು ?
ಎ) 40
ಬಿ) 60
ಸಿ) 61
ಡಿ) 63
11) 12 ಜನ ವಿದ್ಯಾರ್ಥಿಗಳ ಸರಾಸರಿ ವಯಸ್ಸು 13, ಅವರ ವಯಸ್ಸಿಗೆ
ಶಿಕ್ಷಕನ ವಯಸ್ಸು ಸೇರಿಸಿದರೆ ಸರಾಸರಿ 16 ಕ್ಕೆ ಏರುತ್ತದೆ ಹಾಗಾದರೆ ಶಿಕ್ಷಕನ ವಯಸ್ಸು ಎಷ್ಟು?
ಎ) 36
ಬಿ) 52
ಸಿ) 42
ಡಿ) 48
12. ಒಂದು
ತರಗತಿಯಲ್ಲಿ ಹೆಣ್ಣು ಮಕ್ಕಳು ಗಂಡುಮಕ್ಕಳಿಗಿಂತ ಐದು ಪಟ್ಟು ಇದ್ದಾಗ, ಆ ತರಗತಿಯ ಒಟ್ಟು ಮಕ್ಕಳ ಸಂಖ್ಯೆ
ಈ ಕೆಳಗಿನವುಗಳಲ್ಲಿ ಯಾವುದು ಆಗಿರುವುದಿಲ್ಲ ?
(1) 35
(2) 24
(3) 42
(4) 30
13) ಈ ಕೆಳಗಿನ ಯಾವ ವರ್ಷವು ಮಾತ್ರ ಅಧಿಕ ವರ್ಷವಾಗಿದೆ.
ಎ) 1990
ಬಿ) 1992
ಸಿ) 1994
ಡಿ) 1998
14) 100 ಮಕ್ಕಳಿರುವ ಒಂದು ತರಗತಿಯಲ್ಲಿ 20 ಮಂದಿ ಇಂಗ್ಲೀಷ್
ಬಲ್ಲವರು. 20 ಮಂದಿ ಹಿಂದಿ ಬಾರದವರು ಮತ್ತು 10 ಮಂದಿ ಇಂಗ್ಲೀಷ್ ಮತ್ತು ಹಿಂದಿ ಇವೆರಡೂ ಬಾರದವರು.
ಹಾಗಾದರೆ ಇಂಗ್ಲೀಷ್ ಮತ್ತು ಹಿಂದಿ ಇವೆರಡನ್ನೂ ಬಲ್ಲವರ ಸಂಖ್ಯೆ
ಎ) 14
ಬಿ) 15
ಸಿ) 20
ಡಿ) 10
15) 2016 ರಲ್ಲಿ ಕ್ರಿಸ್ಸ್ ಮಸ್ಸ್ ಭಾನುವಾರ ಬಂದಿದೆ.
ಹಾಗಾದರೆ ಮುಂಬರುವ ವರ್ಷದ ಮೊದಲ ದಿನ ಯಾವ ವಾರ?
ಎ) ಶನಿವಾರ
ಬಿ) ಭಾನವಾರ
ಸಿ) ಸೋಮವಾರ
ಡಿ) ಮಂಗಳವಾರ
16. ಪ್ರತಿಯೊಂದು
ವಾರ್ಷಿಕ ಪರೀಕ್ಷೆಯ ಗರಿಷ್ಟ ಅಂಕ 500 ಗಳಿರುವ ಮೂರು ಪರೀಕ್ಷೆಗಳಲ್ಲಿ ಒಬ್ಬ ವಿದ್ಯಾರ್ಥಿಯು ಮೊದಲನೆಯ
ವಾರ್ಷಿಕ ಪರೀಕ್ಷೆಗಳಲ್ಲಿ ಕ್ರಮವಾಗಿ ಶೇ. 45 ಮತ್ತು ಶೇ.55 ಅಂಕಗಳನ್ನು ಗಳಿಸಿರುತ್ತಾನೆ. ಒಟ್ಟು
ಸರಾಸರಿ ಶೇ. 60 ಆಗಬೇಕಾದರೆ ಅವನು ಮೂರನೆಯ ವಾರ್ಷಿಕ ಪರೀಕ್ಷೆಯಲ್ಲಿ ಎಷ್ಟು ಅಂಕಗಳನ್ನು ಗಳಿಸಬೇಕಾಗುತ್ತದೆ
?
(1) 450
(2) 400
(3) 350
(4) 300
17) ಅಧಿಕ ವರ್ಷವಲ್ಲದ ಒಂದು ಕ್ಯಾಲೆಂಡರ್ ವರ್ಷದಲ್ಲಿ ಗಣರಾಜ್ಯೋತ್ಸವ
ಸೋಮವಾರ ಬಂದಿತ್ತು. ಅದೇ ವರ್ಷದ ಸ್ವಾತಂತ್ಯ್ರ ದಿನಾಚರಣೆಯನ್ನು
ಯಾವ ವಾರ ಆಚರಿಸಲಾಗುತ್ತೆ ?
ಎ) ಶುಕ್ರವಾರ
ಬಿ) ಶನಿವಾರ
ಸಿ) ಭಾನುವಾರ
ಡಿ) ಸೋಮವಾರ
18) ಒಂದು ಗಡಿಯಾರದಲ್ಲಿ ಸಮಯ 9 ಗಂಟೆ 12 ನಿಮಿಷ ತೋರಿಸುತ್ತಿದ್ದರೆ
ಅವೆರಡರ ನಡುವಿನ ಕೋನವು ?
ಎ) 156˚
ಬಿ) 162˚
ಸಿ) 150˚
ಡಿ) 152˚
19) 15 ಅಡಿ ಉದ್ದ 2 ಅಡಿ ಅಗಲ ಮತ್ತು 12 ಅಡಿ ಎತ್ತರದ.
ಗೊಡೆ ನಿರ್ಮಿಸಲು 1x1x1 ಗಾತ್ರದ ಇಟ್ಟಿಗೆಗಳು ಎಷ್ಟು
ಬೇಕು ?
ಎ) 300
ಬಿ) 360
ಸಿ) 330
ಡಿ) 720
20) 20 ಹಸುಗಳು 20 ದಿನದಲ್ಲಿ 20 ಚೀಲ ಆಹಾರ ತಿನ್ನುತ್ತವೆ.
ಹಾಗದರೆ ಎರಡು ದಿನದಲ್ಲಿ ಎಷ್ಟು ಚೀಲ ಅಹಾರ ತಿನ್ನುತ್ತವೆ?
ಎ) 1/10 ಚೀಲ
ಬಿ) 1/5 ಚೀಲ
ಸಿ) 2 ಚೀಲ
ಡಿ) 1 ಚೀಲ
tq sir
ReplyDeleteAnswer
ReplyDeleteThank you sir
ReplyDeleteIf any wrong means m sry...
ReplyDelete1 D
2 C
4 B
6 C
8 B
11 B
12 A
13 B
14 D
15 B
17 B
1- B
DeleteS,1,6&8 is wrong,
DeleteVery nice questions..Thank u sir
ReplyDeleteSo nice sir thank you
ReplyDelete